ಮಿಥಿಲೆಯ ಮೈಥಿಲಿ - ಅಯೋಧ್ಯಾ ರಾಮನ ಪ್ರಿಯ ಸಖಿ

Author : ಗುಡಿಬಂಡೆ ಅನುರಾಧ ಆನಂದ್

Pages 82

₹ 80.00




Year of Publication: 2024
Published by: ವೈಡೂರ್ಯ ಪ್ರಕಾಶನ,ಗುಡಿಬಂಡೆ
Address: ವೈಡೂರ್ಯ ಪ್ರಕಾಶನ,ಗುಡಿಬಂಡೆ-561209,ಚಿಕ್ಕಬಳ್ಳಾಪುರ ಜಿಲ್ಲೆ,ಕರ್ನಾಟಕ ರಾಜ್ಯ.
Phone: 9972765958

Synopsys

ಮಿಥಿಲೆಯ ಮೈಥಿಲಿಗೆ ಮುನ್ನುಡಿಯನ್ನು ಬರೆದಿರುವಂತಹ ಡಾ.ಜಿ.ಪಿ.ಬ್ರಹ್ಮಪ್ರಕಾಶ್ ರವರು "ಈ ಕವನ ಸಂಕಲನದ ಪ್ರಥಮ ಕವನ ಸಂಪೂರ್ಣ ರಾಮಾಯಣವನ್ನು ವ್ಯಕ್ತಪಡಿಸುತ್ತದೆ.ಶ್ರೀ ರಾಮಚಂದ್ರನ ಜನನದಿಂದ ಪ್ರಾರಂಭವಾಗಿ ಭೂಜಾತೆ ಸೀತೆ ತನ್ನ ತಾಯ ಮಡಿಲನ್ನು ಸೇರುವವರೆವಿಗೂ ಮುಂದುವರಿದು ರಾಮಾಯಣವನ್ನು ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಂತೆ ಭಾಸವಾಗುತ್ತದೆ.ಮೊತ್ತೊಂದು ಕವನವು ಬಾಹುಬಲಿ ಸ್ವಾಮಿ ಸಾವಿರಾರು ವರ್ಷಗಳ ಕಾಲ ದಣಿವರಿಯದೆ ನಿಂತ ಮಹಾಚೇತನ,ಚಿರಂಜೀವ ಸೌಂದರ್ಯ ಶ್ರವಣಬೆಳಗೊಳದ ಗೊಮ್ಮಟನನ್ನು ಮನಸಾರೆ ಸ್ಮರಿಸಲಾಗಿದೆ.ತ್ಯಾಗದಿಂದ ಶಾಂತಿಯೆಂದು ಸಾರಿದ ವೈರಾಗ್ಯ ಮೂರುತಿಗೆ ನಮೋ ಎನ್ನಲಾಗಿದೆ" ಎಂದು ತಿಳಿಸಿದ್ದಾರೆ.

Excerpt / E-Books

ಗುಡಿಬಂಡೆ ಅನುರಾಧ ಆನಂದ್ ರವರ ಸ್ವರಚಿತ ಕಾವ್ಯಮಾಲೆಯಲ್ಲಿ ೩೯ ಕವನಗಳು ಅಡಕವಾಗಿದ್ದು ಎಲ್ಲವೂ ತಮ್ಮದೇ ಆದ ವಿಶೇಷ ವೈಶಿಷ್ಟ್ಯ ಹೊಂದಿವೆ.ಈ ಕಾವ್ಯಮಾಲೆಯಲ್ಲಿರುವ ಕವನಗಳು ಸರಳವೂ,ಅರ್ಥಪೂರ್ಣವೂ ಆಗಿರುವುದರಿಂದ ಎಲ್ಲ ವರ್ಗದ ಜನರಿಗೆ ಮನಮುಟ್ಟುವಂತಿದೆ ಎಂದು ಶುಭಹಾರೈಕೆಯಲ್ಲಿ ಡಾ.ಸಂಗಮ ತಿಳಿಸಿದ್ದಾರೆ.

Reviews

ಮಿಥಿಲೆಯ ಮೈಥಿಲಿ ಕಾವ್ಯಮಾಲೆಯಲ್ಲಿ "ಮಿಥಿಲೆಯ ಮೈಥಿಲಿ","ಬಾಹುಬಲಿ","ನಾಡಿಗಾಗಿ ಬಾಳಿದವರು ನಾವು","ಅನ್ನದಾತ ಸುಖೀಭವ","ಬೆಳಗುತಿರಲಿ ಕನ್ನಡದ ದೀಪ","ಜಾನಪದ ಕಲೆ","ಜಗಜ್ಯೋತಿ ಬಸವಣ್ಣ","ತೂಗುವ ಬಾರೆ ತೊಟ್ಟಿಲ","ಕರ್ತವ್ಯ" ಮುಂತಾದ ಕಥಾವಸ್ತುಗಳು ಇಲ್ಲಿನ ಕವನಗಳದ್ದು.ಪುಸ್ತಕದ ಪರಿವಿಡಿಯಲ್ಲಿ "ಒಡೆಯ","ಕಡಲು","ನಿಟ್ಟುಸಿರು","ಬಣ್ಣದೋಕುಳಿ","ಜೀವನದ ಗುಟ್ಟು","ಸ್ನೇಹ" ಮುಂತಾದ ಶೀರ್ಷಿಕೆಗಳ ಕವನಗಳಿವೆ.